ಫಿಟ್ಸ್ ಜೆóರಲ್ಡ್, ಫ್ರಾನ್ಸಿಸ್ ಸ್ಕಾಟ್ ಕೆ
1896-1940 ಕಾದಂಬರಿಕಾರ. ಐರಿಷ್ ಮೂಲದವ. ಹುಟ್ಟಿದ್ದು ಮಿನೆಸೋಟದ ಸೇಂಟ್‍ಪಾಲ್‍ನಲ್ಲಿ. ವಿದ್ಯಾಭ್ಯಾಸ ಮುಗಿದ ಅನಂತರ 1917ರಲ್ಲಿ ಮೊದಲ ಮಹಾಯುದ್ಧಕ್ಕೆ ಸೇರಿದ. ಅನಂತರ ಕೆಲಕಾಲ ಪ್ರಚಾರಸಂಸ್ಥೆಯೊಂದರಲ್ಲಿ ಕೆಲಸಮಾಡಿದ. ತನ್ನ ಮೊದಲ ಕಾದಂಬರಿ ದಿಸ್ ಸೈಡ್ ಆಫ್ ಪ್ಯಾರಡೈಸ್ (1920) ಇವನಿಗೆ ಕೀರ್ತಿ ತಂದಿತು. ಎರಡನೆಯ ಕಾದಂಬರಿ ದಿ ಬ್ಯೂಟಿಫುಲ್ ಅಂಡ್ ಡ್ಯಾಮ್ಡ್ (1922) ಯುದ್ಧನಂತರದ ಜನತೆಯ ಸಿನಿಕತನ ಅನಾಥ ಪರಿಸ್ಥಿತಿಗಳನ್ನು ಚಿತ್ರಿಸುತ್ತದೆ. ಜೆಲ್ಡಸೇರ್ ಎಂಬಾಕೆಯನ್ನು ಮದುವೆಯಾಗಿ ಲಾಂಗ್ ಐಲೆಂಡಿನಲ್ಲಿ ನೆಲಸಿದ. ಇವನ ಅತ್ಯಂತ ಶ್ರೇಷ್ಠ ಕಾದಂಬರಿ ದಿ ಗ್ರೇಟ್ ಬಿ (1925) ಜನತೆಯಲ್ಲಿನ ಹುಸಿ ಮೌಲ್ಯಗಳನ್ನು ಬಯಲಿಗೆಳೆದಿದೆ.

	ಪ್ಲ್ಯಾಪರ್ಸ್ ಅಂಡ್ ಫಿಲಾಸಫರ್ಸ್ (1920), ಟೇಲ್ಸ್ ಆಫ್ ದಿ ಜಾóಸ್ ಏಜ್ (1922), ಆಲ್ ದಿ ಸ್ಯಾಡ್ ಯಂಗ್ ಮೆನ್ (1926), ಟ್ಯಾಪ್ಸ್ ಎಟ್ ರೆವಿಲ್ (1935)- ಇವು ಕಥಾಸಂಕಲನಗಳು.

	ಮರಣಾನಂತರ ಈತನ ದಿನಚರಿ ಹಾಗೂ ಪತ್ರಗಳನ್ನು ದಿ ಕ್ರ್ಯಾಕ್-ಆಪ್ ಎಂಬ ಶೀರ್ಷಿಕೆಯಲ್ಲಿ ಪ್ರಕಟಿಸಲಾಯಿತು (1945).										     (ಎಸ್.ಎಸ್.ಎಲ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ